"ಕನ್ನಡ ನುಡಿಯೇ ನೀನೆಷ್ಟು ಚೆಂದ, ಏನೇ ಗೀಚಿದರು ಆಗುವೆ ಶ್ರೀಗಂಧ, ಸಿಂಗಾರದ ಗಣಿ ನಿನ್ನ ಶಬ್ದ ಸಂಪತ್ತು ಬಂಗಾರಕ್ಕಿಂತಲೂ ಶ್ರೇಷ್ಠ ನುಡಿ ಮುತ್ತು”
“ಹೊತ್ತಿತೋ ಹೊತ್ತಿತೋ ಕನ್ನಡ ದೀಪ, ಮುಗಿಯಿತೋ ಮುಗಿಯಿತೋ ಶತಮಾನಗಳ ಶಾಪ”
ತಮ್ಮೆಲ್ಲರಿಗೂ ಎಪ್ಪತ್ತನೇಯ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇವೆ. ಕನ್ನಡಿಗರ ಹಬ್ಬವೆಂದರೆ ನವೆಂಬರ್ ೧ ರ ಕನ್ನಡ ರಾಜ್ಯೋತ್ಸವ. ಬ್ರಿಟಿಷರ ಕಾಲದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷಾ ಪ್ರದೇಶಗಳನ್ನುಒಗ್ಗೂಡಿಸಿ, ಕರ್ನಾಟಕದ ಏಕೀಕರಣಕ್ಕಾಗಿ ಹಲವಾರು ರಾಜಕೀಯ ನಾಯಕರು, ಸಾಹಿತಿಗಳು, ಪತ್ರಕರ್ತರು ಹೋರಾಡಿದ ಶ್ರಮದ ಫಲವಾಗಿ ೧೯೫೬ ರಲ್ಲಿ ನವೆಂಬರ್ ೧ ರಂದು ಕರ್ನಾಟಕವು ಒಂದಾಯಿತು. ಹೀಗೆ ಬೆಳೆದು ಬಂದ ಈ ಕನ್ನಡ ನಾಡಿಗೆ "ಕರ್ನಾಟಕ " ಎಂಬ ಹೆಸರನ್ನು ೧೯೭೩ ರಲ್ಲಿ ಮುಖ್ಯಮಂತ್ರಿ ದೇವರಾಜ್ ಅರಸರ ಕಾಲದಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡಲಾಯಿತು. ಆದ್ದರಿಂದ ಪ್ರತಿ ವರ್ಷವೂ ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತ ಬಂದಿದ್ದೇವೆ.
ಜೈ ಕರ್ನಾಟಕ ,ಜೈ ಭುವನೇಶ್ವರಿ!
“ಸಿರಿಗನ್ನಡ ಗೆಲ್ಗೆ, ಸಿರಿಗನ್ನಡಂಬಾಳ್ಗೆ”