'ಕನ್ನಡಿಗರ ಸಂಭ್ರಮ'
ಕನ್ನಡ ಎಂಬುದು ಒಂದು ಸುಂದರ ಭಾಷೆ. ಅದರಲ್ಲಿ ಏನೇ ಬರೆದರೂ ಅದು ಶ್ರೀಗಂಧವಾಗುವುದು. ಕನ್ನಡ ನುಡಿಗಳು ಅಲಂಕಾರದ ನಿಧಿ, ಕನ್ನಡದ ಮಾತು ಬಂಗಾರಕ್ಕಿಂತಲೂ ಮಿಗಿಲು, ಮುತ್ತುಗಳಿಗಿಂತಲೂ ಅಮೂಲ್ಯ!
ಎಲ್ಲರಿಗೂ ೭೧ ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಕನ್ನಡಿಗರ ಹೆಮ್ಮೆಯ ಹಬ್ಬವೇ ಕನ್ನಡ ರಾಜ್ಯೋತ್ಸವ. ಪ್ರತಿ ವರ್ಷ ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ, ಅಖಂಡ ಕರ್ನಾಟಕವನ್ನು ನಿರ್ಮಿಸಲು ಅನೇಕ ರಾಜಕೀಯ ನಾಯಕರು, ಸಾಹಿತಿಗಳು, ಪತ್ರಕರ್ತರು ಹಾಗೂ ಕನ್ನಡಪರ ಹೋರಾಟಗಾರರು ಶ್ರಮಿಸಿದರು. ಅವರ ಅವಿರತ ಹೋರಾಟದ ಫಲವಾಗಿ ೧೯೫೬ರ ನವೆಂಬರ್ ೧ರಂದು ಕನ್ನಡ ಭಾಷಿಕ ಪ್ರದೇಶಗಳೆಲ್ಲವೂ ಒಂದಾಗಿ ಮೈಸೂರು ರಾಜ್ಯದ ಉದಯವಾಯಿತು.
ಈ ಕನ್ನಡ ನಾಡಿಗೆ ೧೯೭೩ ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಡಳಿತಾವಧಿಯಲ್ಲಿ 'ಕರ್ನಾಟಕ' ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ಪ್ರತಿವರ್ಷ ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾ ಬಂದಿದ್ದೇವೆ.
ಮನದೊಳಗೆ ಕನ್ನಡ ಮನಸ್ಸೊಳಗೆ ಕನ್ನಡ, ಕನ್ನಡವೇ ಎಲ್ಲಾ ,ಕನ್ನಡವಿಲ್ಲದೇ ಬೇರೇನೂ ಇಲ್ಲ.
ಜೈ ಕರ್ನಾಟಕ! ಜೈ ಭುವನೇಶ್ವರಿ!
"ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!"